ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನ ಹೃದಯ ಭಾಗದಲ್ಲಿ ಅಂಬೇಡ್ಕರ್‌ ವೀಧಿಯಲ್ಲಿ ನೆಲೆಗೊಂಡಿರುವ ಐತಿಹಾಸಿಕ ಕಟ್ಟಡವಾಗಿದೆ. ಬ್ರಿಟೀಷ್‌ ಭಾರತದ ಆಳ್ವಿಕೆಯಲ್ಲಿ ಇದನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಇದನ್ನು ಹೈಸ್ಕೂಲ್‌ ಎಂತಲೂ ನಂತರ 1927 ರಲ್ಲಿ ಇದನ್ನು ಇಂಟರ್‌ಮೀಡಿಯೇಟರ್‌ ಕಾಲೇಜು ಎಂತಲೂ ಕರೆಯಲಾಯಿತು. == ಧ್ಯೇಯ == ನೈತಿಕ ಉನ್ನತ ಕಲಿಕೆಯ ಮೂಲಕ ಸಾಮಾಜಿಕ ನ್ಯಾಯ, ಸಹಿಷ್ಣುತೆ ಮತ್ತು ಸಾರ್ವತ್ರಿಕ ಜ್ಞಾನ ಮೂಡಿಸಿವುದು. ಅದರ ಮೂಲಕ ಮುಂದಿನ ತಲೆಮಾರಿನ ಕಲಿಯುವವರನ್ನು ಕ್ರಿಯಾತ್ಮಕ ಮತ್ತು ಸಶಕ್ತ ಯುವಶಕ್ತಿಯಾಗಿ ಪರಿವರ್ತಿಸಲು ಉತ್ತೇಜಿಸುವುದು. == ವಿಭಾಗಗಳು == === ಕಲಾ ವಿಭಾಗ === ಇತಿಹಾಸ ವಿಭಾಗ ರಾಜ್ಯಶಾಸ್ತ್ರ ವಿಭಾಗ ಅರ್ಥಶಾಸ್ತ್ರ ವಿಭಾಗ ಕನ್ನಡ ಅಧ್ಯಯನ ವಿಭಾಗ ಆಂಗ್ಲ ಅಧ್ಯಯನ ವಿಭಾಗ ಸಮಾಜಶಾಸ್ತ್ರ ವಿಭಾಗ ಪತ್ರಿಕೋದ್ಯಮ ಮತ್ತು ದೃಶ್ಯಕಲಾ ವಿಭಾಗ ಭೂಗೋಳಶಾಸ್ತ್ರ ವಿಭಾಗ == ಉದ್ಧೇಶಗಳು == ಉನ್ನತ ಶಿಕ್ಷಣ ಕಲಿಯುವವರಿಗೆ ಆರೋಗ್ಯಕರ ಮತ್ತು ಸಂಶೋಧನಾ ಸ್ನೇಹಿ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು. ವಯುಕ್ತಿಕ ಕೌಶಲ್ಯವನ್ನು ವೃದ್ಧಿಸುವ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನೊದಗಿಸುವುದು. ಶಿಕ್ಷಣದಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು. == ಪ್ರಶಸ್ತಿಗಳು == ನಿಂದ ʼಬಿ++ʼ ಮಾನ್ಯತೆಯನ್ನು ಪಡೆದಿದೆ. == ಉಲ್ಲೇಖ ==